Seat Number UW28 😍 ಬಸ್ಸಿನಲ್ಲಿ ಒಂದು ಭೂತ
ರಾತ್ರಿ 9.40 pm ಗಂಟೆ. ಊರಿಂದ ಬೆಂಗಳೂರಿಗೆ ಹೋಗುವ ಬಸ್ ಅದ್ಧೂರಿಯಾಗಿ ಬಂದು ನಿಂತಿತು.
ಸಿಂಗಲ್ ಸೀಟ್ ಇಲ್ಲದ ಕಾರಣ ಎರಡು ಸೀಟ್ನಲ್ಲಿ ಒಂದು ಕಿಟಕಿ ಬದಿಯ ಸೀಟ್ ಬುಕ್ ಮಾಡಿದ್ದೆ.
ನನ್ನ ಸೀಟು no UW28 ಹಾಗೆ ಬುಕ್ ಮಾಡಿದ ಸೀಟ್ಅನ್ನು ಹತ್ತಿ ಮಲಗಿದೆ.
ಪಕ್ಕದ ಸೀಟ್ನಲ್ಲಿ ಯಾರು ಬರುವರೆಂದು ಕಾಯುತ್ತಾ ಮಲಗಿದ್ದೆ ಸ್ವಲ ಸಮಯದ ನಂತರ ಬಸ್ ಹೊರಟಿತು. ಕಂಡಕ್ಟರ್ ಕೇಳಿ ತಿಳಿದುಕೊಂಡೆ ಪಕ್ಕದ ಸೀಟ್ ಬುಕ್ ಆಗಿಲ್ಲವೆಂದು ಕುಶಿಯಿಂದ ಫುಲ್ ಎರಡು ಸೀಟ್ ಸೇರಿ ಆರಾಮಾಗಿ ಮಲಗಬಹುದು ತಂದಿದ್ದ ಬ್ಲಾಂಕೆಟ್ ಹೊದ್ದು ಮಲಗಿದೆ.–
ಸರಿಸುಮಾರು ಎರಡು ತಾಸಿನ ನಂತರ ಜೋರಾಗಿ ಗೊರಕೆ ಹೊಡೆಯುವ ಶಬ್ದ ಕೇಳಿ ಎಚ್ಚರವಾಯಿತು
ಅದೇ ಸಮಯದಲ್ಲಿ ನನ್ನ ಪಕ್ಕದ ಸೀಟಿನಲ್ಲಿ ಒಬ್ಬ ಬಿಳಿ ಶರ್ಟ್, ಕಪ್ಪು ಜೀನ್ಸ್ ಧರಿಸಿರುವ, ಅಪರಿಚಿತ ವ್ಯಕ್ತಿ ಮಲಗಿದ್ದ . ಅವನು ನನ್ನ ಕಡೆ ನೋಡಿ ಒಮ್ಮೆ ನೋಡಿ ತುಸು ನಗುಹರಿಸಿದ್ದ. ನಾನು ಕೂಡ ತಲೆಅಡಗಿಸಿದಂತೆ ನಗುಮಾಡಿ ಕಂಡಕ್ಟರ್ ಸುಳ್ಳು ಹೇಳಿದ್ದಾನೆ ಎಂದು ಮಗ್ಗಲು ಬದಲಿಸಿ ಮಲಗಿದೆ.
ಸ್ವಲ ಸಮಯದ ನಂತರ ಪಟ್ ಎಂದು ಅವನ ಕಾಲು ನನ್ನ ಕಾಲಿನ ಮೇಲೆ ಬಿತ್ತು , ಯಮ್ಮ ಎಂದು ಬೆಚ್ಚಿ ಬಿದ್ದೆ ! ಪಕ್ಕದವನು ಕರೆದೆ ಚಲನವಲನವೇ ಇರಲಿಲ್ಲ.
ಅರ್ಧ ಗಂಟೆ ಕಳೆದರೂ… ಅವನು ಎದ್ದಿಲ್ಲ. ನಾನು ಹೆದರಲಾರಂಭಿಸಿದೆ.
ಹೆದರಿ ಹೆದರಿ ಕೇಳಿದೆ – "ಸರ್…?"
ಯಾವುದೆ ಪ್ರತಿಕ್ರಿಯೆ ಇಲ್ಲ.
ಚಂಗನೆ ಅವನ ಮೇಲೆಇಂದ ಇಳಿದು ಕಂಡಕ್ಟರ್ ಹತ್ತಿರ ಓಡಿದೆ ಹಾಗೆ ನಡೆದ ವಿಷಯ ತಿಳಿಸಿದೆ!
ಕಂಡಕ್ಟರ್ ಏನು ಕಾಮಿಡಿನ ಆ ಸೀಟ್ ಕಾಲಿ ಇದೆ ಎಂದು ಮೊದಲೆ ಹೇಳಿದೆ ತಾನೆ ಅಂದರು
ಮೊದಲೆ ಹೆದರಿದ ನಾನು ಏನು ಸರ್ ಹೇಳ್ತಾ ಇದಿರಿ
ಈಗ ಅಷ್ಟೆ ನನ್ನ ಪಕ್ಕ ಹಾಗಾದ್ರೆ ಮಲಗಿದ್ದು ಯಾರು ?
ಎಂದು ಇಬ್ಬರು ನನ್ನ ಸೀಟಿನ ಹತ್ತಿರ ಬಂದೆವು ಅಲ್ಲಿ ಯಾರೂ ಕೂಡ ಇರಲಿಲ್ಲ 😒
ಏನ ಸರ್ ನಿಮಗೆ ಏನೊ ಕನಸು ಬಿದ್ದಿರುತ್ತೆ ಸುಮ್ಮನೆ ಮಲಕೊಳ್ಳಿ ಎಂದು ಗೊಣಗಿಕೊಂಡು ಹೋದ.
ನಾನು ಇದು ಹೆಂಗೆ ಗುರು ನಿದ್ದೆ ಕಣ್ಣಲ್ಲಿ ನಾನು ಅವನನ್ನು ನೋಡಿದನ ಹಾಗಾದರೆ ಅವನು ಎಲ್ಲಿ
ಒಂದು ಕ್ಷಣದಲ್ಲಿ ಕಂಡಕ್ಟರ್ ನಿಜ ನ ಸುಳ್ಳು ಮಾಡಿದನಲ್ಲ! ಇದರ ಬಗ್ಗೆ ಇನ್ವೆಸ್ಟಿಗೇಷನ್ ಆಗಲೇ ಬೇಕು ಎಂದು ಜಾಡು ಹಿಡಿದು ಕುಳಿತೆ..
ಬೆಂಗಳೂರಿಗೆ ಬರುವಾಗ ಜಾಲಹಳ್ಳಿ ಇಂದ ಕೆಂಪೇಗೌಡ ಬರುವರೆಗೂ ಇಳಿದವರನ್ನು ಬಗ್ಗಿ ನೋಡಿ ಹುಡುಕಿದೆ ನಾ ನೋಡಿದ ವಕ್ತಿ ಬಸ್ಸಿನಿಂದ ಇಳಿಯಲಿಲ್ಲ.
ಹಾಗೆ ಬಸ್ಸು ಮುಂದೆ ನನ್ನ ಸ್ಟಾಪ್ ಶಾಂತಿನಗರದ ಕಡೆ ಚಲಿಸಿತು .. ನಾನು ಅಪ್ಪರ್ ಸೀಟ್ ಇಳಿದು ಇಳಿಯಲು ಡೋರ್ ಬಳಿಗೆ ನಡೆದುಕೊಂಡು ಬಂದು ನಿಂತೆ! ತಕ್ಷಣ ಯಾರೋ ಕರೆದಹಾಗಾಯಿತು !
ಸರ್ ಸ್ವಲ್ಪ ಕಾಲು ತೆಗಿರಿ ಚಪ್ಪಲಿ ತೆಗಿಬೇಕು ಎಂದು
ತಿರುಗಿ ನೋಡಿದರೆ ಬಿಳಿ ಶರ್ಟ್, ಕಪ್ಪು ಜೀನ್ಸ್ ಧರಿಸಿರುವ ಅದೆ ವ್ಯಕ್ತಿ ಮುಖ ನೋಡಿ ಮತ್ತೆ ಆದೆ ರೀತಿ ನಕ್ಕುಬಿಟ್ಟ | ಇವನೇ ಅವನು ಕನಸಲ್ಲ ನನಸು.
। ರಾತ್ರಿ ನನ್ನ ಪಕ್ಕ ಮಲಗಿದ್ರಿ ತಾನೆ ಆಮೇಲೆ ಎಲ್ಲಿ ಹೋಗಿದ್ರಿ ಸರ್ ನೀವು ಎಂದೆ ! ?
ಅವರು ನಗುತ್ತಾ 😁ಸರ್ ನಮ್ದು ಕೆಳಗಡೆ ಸೀಟ್
ಅಲ್ಲಿ ನಮ್ಮ ಫ್ಯಾಮಿಲಿ ನಾನು ನನ್ನ ಮಗು ಹೆಂಡತಿ ಮಲಗಿದೆವು ನಾನು ಗೊರಕೆ ಹೊಡೆಯುವ ಕಾರಣಕ್ಕೆ ನನ್ನ ಮಗು ಮಲಗಲಿಲ್ಲ ಹಾಗು ಜಾಗ ಕೂಡ ಚಿಕ್ಕದಿತ್ತು
ಮೇಲೆ ಸೀಟ್ ಖಾಲಿ ಇದ್ದ ಕಾರಣ ಬಂದು ಮಲಗಿದೆ ಎಂದರು..
ಅದು ಸರಿ ನಾನು ಕಂಡಕ್ಟರ್ ಇಬ್ಬರೂ ಬಂದು ನೋಡಿದ್ದಾಗ ನೀವು ಎಲ್ಲಿ ಹೋಗಿದ್ರಿ ?
ಸರ್ ನೀವು ಕಂಡಕ್ಟರ್ ಗೆ ನನ್ನ ಎಬ್ಬಿಸಲು ಹೇಳಲು ಹೋಗಿದ್ದಿರೆಂದು ಯಾಕೆ ಸುಮ್ಮನೆ ಖಾಲಿ ಸೀಟ್ ನಲ್ಲಿ ಮಲಗಿಕೊಂಡರೆ ಕಂಡಕ್ಟರ್ ಸುಮ್ಮನೆ ಬಯ್ತಾರೆ ಎಂದು ನಾನು ಕೆಳಗಡೆ ಬಂದು ಮಲಗಿದೆ .
ಮತ್ತೆ ನೀವು ಎಲ್ಲಿ ಇಳಿಯೋದು sir ಅಂತ ಕೇಳಿದರು …
ಎಂತಸಾವು ಮರ್ರೆ ನಿಮದ್ದು ಕಥೆ ಕೇಳಿ ನಾನು ಎಲ್ಲಿ ಇಳಿಬೇಕು ಅನ್ನೋದೆ ಮರೆತು ಹೋದೆ 🙈🙈🤪
✍️ ಪೃಥ್ವಿರಾಜ್ ಕೊಪ್ಪ
Comments
Post a Comment