#ಹೀಗೊಂದು_ನಾಯಿಮರಿಯ ಕಥೆ
ಹಿಂದಿನ ವಾರ ನನ್ನ ಸ್ನೇಹಿತನ ಬೇಟಿಯಾಗಲೆಂದು ನನ್ನ ಹಳೆ ಬಾಡಿಗೆ ಮನೆ ಹತ್ತಿರ ಹೋಗಿದ್ದೆ .
ನಾವು ಯಾವಾಗಲು ಭೇಟಿ ಆಗುವ ಸ್ಥಳ ಅಂದ್ರೆ ಚೆಟಾ ಅಂಗಡಿ ..ಅಲ್ಲಿ ಒಂದು ಲೆಮನ್ ಟೀ ಕುಡಿದು ಪಕ್ಕದ ಬಾಗಿಲು ಹಾಕಿರುವ ಅಂಗಡಿಯ ಮೆಟ್ಟಿಲು ಕಲ್ಲು ಮೇಲೆ ಕೂತು ಏನಾದ್ರು ಮಾತುಕತೆ ಅದು ಇದು ಸ್ಟೋರಿ ಹೇಳಿಕೊಂಡು ಬರುತ್ತಾ ಇದ್ದೆವು .
ಮೊದಲು ಅದೆ ರೋಡಿನ ಬದಿಯಲ್ಲಿ ನಮ್ಮ ಮನೆ ಇದ್ದಿದ್ದರಿಂದ , ಚೆಟಾನ ಅಂಗಡಿನೆ ನಮಗೆ ಹಾಲು, ಮೊಸರು ಸಣ್ಣ ಪುಟ್ಟ ವಸ್ತುಗಳು ತರುವ ಅಂಗಡಿ ಆಗಿತ್ತು.
ನಾನು ಪ್ರತಿಸಲ ಏನಾದ್ರು ವಸ್ತುಗಳನ್ನು ಅಂಗಡಿಗೆ ತರುವಲು ಹೋದಾಗ , ಅಲ್ಲಿ ಮೂರೂ ನಾಯಿ ಮರಿಗಳು 🐶 ಯಾವಾಗಲು ಇರುತ್ತಿದ್ದವು.
ಅಂಗಡಿಗೆ ಬಂದು ಹೋಗುವರೆಲ್ಲ ಪಾರ್ಲೆಜಿ ಬಿಸ್ಕಸ್ಟ್ ನಾಯಿ ಮರಿಗಳಿಗೆ ಹಾಕಿ ಹೋಗ್ತಾ ಇದ್ರು.. ನನಗು ಕೂಡ ನಾಯಿ ಅಂದ್ರೆ ತುಂಬಾ ಇಷ್ಟ ..ನಾಯಿ ಮರಿಗಳು ಅಂತೂ ಪಾರ್ಲೆಜಿ ಬಿಸ್ಕಸ್ಟ್ ತಿಂದು ದಷ್ಟ ಪುಷ್ಟವಾಗಿ ಬೆಳೆದ್ದಿದವು , ಊರಿನ ಕಡೆ ಆಗಿದ್ದಿದ್ದರೆ ನಾಯಿಮರಿಗಳು ನಮ್ಮ ಮನೆಯಲ್ಲಿ ಇರುತ್ತಾ ಇದ್ದವು.
ಹೀಗಿರುವಾಗ ನಾಯಿಮರಿಗಳನ್ನು ನೋಡಿ ಹೆಚ್ಚು ಕಮ್ಮಿ 6 ತಿಂಗಳು ಆಗಿತು .
ನಾಯಿ ಮರಿಗಳು ಎಲ್ಲಿ ಎಂದು ಹುಡುಕುತ್ತಾ ಇದೆ, ಅದೆ ಸಮಯದಲ್ಲಿ ನನ್ನ ಹಿಂಬದಿಯಿಂದ ನಾಯಿ ಬಂದು ಕುಯ್ ಕುಯ್ ಅಂತೂ , ನಾಯಿ ಮರಿ ನಾಯಿ ಆಗಿಬಿಟ್ಟತ್ತು .🐕
ನಾಯಿಗಂತೂ ನನ್ನ ಪರಿಚಯ ಮೊದಲೇ ಸಿಕ್ಕಿತು. ನಾಯಿ ಅಂತೂ ಇನ್ನು ದಷ್ಟ ಪುಷ್ಟವಾಗಿ ಬೆಳೆದು ಚೆಂದವಾಗಿತು ..ಹಾಗೆ ನೋಡಿದರೆ ದುಡ್ಡು ಕೊಟ್ಟು ತಂದ ಪೆಡಿಗಿರಿ ನಾಯಿಗಿಂತ , ಪಾರ್ಲೆಜಿ ತಿಂದು ಬೆಳೆದ ಬೀದಿ ನಾಯಿ ತುಂಬಾ ಚೆನ್ನಾಗಿದೆ ಅನಿಸಿತು.
ಯಾವಾಗಲು ತೆಗೆದುಕೊಳ್ಳುವುದಕ್ಕಿಂತ ಸ್ವಲ್ಪ ದೊಡ್ಡ ಪ್ಯಾಕೆಟಿನ ಪಾರ್ಲೆಜಿ ಬಿಸ್ಕೆಟ್ ನ ಕೊಂಡುಕೊಂಡೆ ಯಾಕೆಂದ್ರೆ ಈಗ ನಾಯಿ, ನಾಯಿಮರಿ ಅಲ್ಲವೆಂದು .
ಕುರು ಕುರು ಅಂತ ಕರೆದು ಬಿಸ್ಕೆಟ್ ಪ್ಯಾಕ್ ನ ಒಡೆದು ಹಾಕಿದೆ .
ನಾಯಿ ಬಂದು ಮೂಸಿ ನನ್ನ ಮುಖ ನೋಡಿ ಒಂದು ರೀತಿ ಬೇಜಾರಾಗಿ ನೋಡಿತು .
ನಾನು ಅಂದುಕೊಂಡೆ ಹೂ ನಾನು ಇಷ್ಟು ದಿನ ಬಂದಿಲ್ಲವಲ್ಲ ನಾಯಿ ನನ್ನ ಮೇಲೆ ಬೇಜಾರಾಗಿದೆ ಎಂದು..
ಅಲ್ಲೇ ಇದ್ದ ಬೇಕರಿ ಚೆಟಾ ..ಸರ್ ಬಿಸ್ಕೆಟ್ ತೆಗೆದು ಕೊಂಡಿದ್ದು ನಿಮಗೆ ತಿನ್ನೋಕ್ಕೆ ಅಂದುಕೊಂಡಿದ್ದೆ , ನಾಯಿಗೆ ಆಗಿದ್ರೆ ಬೇಡ ಅಂತ ಇದ್ದೆ ಅಂದ್ರು ,
ಹೊ ಯಾಕೆ ನಾಯಿಗೆ ಹುಷಾರಿಲ್ಲಾವ ಪಾಪ ಅಂದೆ.
ಸರ್ ಹಾಗೇನಿಲ್ಲ, ನಾಯಿಗೇನು ರಾಜ ಇದ್ದ ಹಾಗೆ ಇದ್ದಾನೆ.
ಈಗ ಈ ಬೀದಿಗೆ ಇವನೇ ಡಾನ್ ಅಂದ್ರು .
ಈ ಬೀದಿಗೆ ಡಾನಾ ಅಗಲಿಕ್ಕೂ ಬಿಸ್ಕೆಟ್ ತಿನ್ನೋಕು ಏನು ಸಂಬಂಧ ಅಂದೆ.
ಬಿಸ್ಕೆಟ್ ಪ್ಯಾಕ್ ತೋರಿಸಿ ಸರ್ 2 ತಿಂಗಳಿಂದ ಪಾರ್ಲೆಜಿ ಬಿಸ್ಕೆಟ್ ನಾಯಿಗಾಗಿ ಯಾರು ಕೊಂಡಿಲ್ಲ ಅಂದ ಚೆಟಾ.
ಅರೆ ಚೆಟಾ ನೀನು ಏನು ಹೇಳುತಾ ಇದ್ದೀಯ ನನಗೆ ಅರ್ಥ ಆಗ್ತಾ ಇಲ್ಲ ಅಂದೆ .
ಅಯ್ಯೋ ಬಿಡಿ ಸರ್ ಏನು ಹೇಳ್ತೀರಾ ಇವ್ಗಳ ಕತೆ ಹಿಂದಿನ ಬೀದಿಯಲ್ಲಿ ಹೊಸ ಕಬಾಬ್ ಹಾಗು ಎಣ್ಣೆ ಅಂಗಡಿ ಆಗಿದೆ , ಅಲ್ಲೇ ರಾತ್ರಿ ೧೧ ಗಂಟೆವರೆಗೂ ಕಬಾಬ್ ಹಾಗು ಅದರ ಮೂಳೆತಿಂದು ಹಿಂಗೆ ಬೆಳೆದು ನಿಂತಿದೆ,
ಆ ಕುಡುಕ ಮುಂಡೇವು ಮೂಳೆ ಯಾವುದು ಕಬಾಬು ಯಾವುದು ಅಂತ ತಿಳಿದೇ ಅರ್ಧ ನಾಯಿಗೆ ಹಾಕ್ತರೆ, ಇವುಗಳು ತಿಂದು ಹೆಚ್ಚಾದ್ರೆ ನಮ್ಮ ಅಂಗಡಿ ಎದುರುನು ಮೂಳೆ ಹಾಕಿರುತ್ತವೆ ಬೆಳ್ಳೆಗೆ ಬೆಳ್ಳಿಗೆನೇ ಬಂದು ಮೂಳೆ ಕ್ಲೀನ್ ಮಾಡಬೇಕು ಸರ್ ತುಂಬಾ ಬೇಜಾರು ಆಗುತ್ತೆ ಅಂದ.😔
ಆಗ ಅಂದುಕೊಂಡೆ ಹೊ ಹೊ ನಾಯಿ ಅದಕ್ಕೆ ನನ್ನ ನೋಡಿ ಬೇಜಾರು ಮಾಡಿಕೊಂಡಿದ್ದು ಕಬಾಬು ಎಲ್ಲಿ ಪಾರ್ಲೆಜಿ ಬಿಸ್ಕೆಟ್ ಎಲ್ಲಿ .
ಮುಂದಿನ ಬಾರಿ ಹೋಗುವಾಗ ಒಂದು ಪ್ಲೇಟ್ ಕಬಾಬ್ ಪಾರಸೆಲ್ಲ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸಿಕೊಂಡು ಬಂದೆ.😍😍
📝 ಪೃಥ್ವಿರಾಜ್ ಬಿ ಎಸ್ .
Comments
Post a Comment