ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ಕೊರೊನ ವೈರಸ್ ಎಂಬ ಸಾಂಕ್ರಾಮಿಕ ಕಾಯಿಲೆ ದೇಶದ ತುಂಬೆಲ್ಲಾ ಹರಡಿದ್ದು, ನಮ್ಮ ಕರ್ನಾಟಕದಲ್ಲಿ ಕೂಡ ಇದರ ತೀವ್ರತೆ ಹೆಚ್ಚಿದ್ದು, 2 ತಿಂಗಳಿಂದ ಎಲ್ಲಾ ಕಡೆ ಎಲ್ಲಾ ಕೆಲಸಗಳನ್ನು ನಿಲ್ಲಿಸಿದ್ದು ಕೆಲವು ದಿನಗಳಿಂದ ಲಾಕ್ ಡೌನ್ ಜಾರಿಗೆಯಲ್ಲಿತ್ತು. ಹಾಗಾಗಿ ಯಾವದೇ ಸಿನಿಮಾ ಕೆಲಸಗಳು ನಡೆದಿದ್ದೀಲ್ಲ.
ಆದ್ರೆ ಇಂದು ಅಶ್ವ ಸಿನಿಮಾದ ಭರ್ಜರಿ ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್ ನೋಡಿದ ಸಿನಿಪ್ರಿಯರಿಗೆ, ಈ ಅಶ್ವ ಸಿನಿಮಾದ ಪೋಸ್ಟರ್ ನಲ್ಲಿ, ಏನೋ ಒಂದು ಹೊಸತನ ಕಂಡುಬಂದ ರೀತಿಯಲ್ಲಿ ಕಾಣುತ್ತಿದೆ , ನೋಡಲು ತುಂಬಾ ಚೆನ್ನಾಗಿದೆ, ಮತ್ತು ಕೇವಲ ಹೊಸಬರನ್ನು ಆಧರಿಸಿ ಮಾಡಿರುವ ಚಿತ್ರ ಇದಾಗಿದ್ದು ವಿಭಿನ್ನ ರೀತಿಯಲ್ಲಿ ಚಿತ್ರವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಹಾಗೆ ಕಂಡು ಬರುತ್ತಿದೆ.
ಮತ್ತು ಅಶ್ವ ಸಿನಿಮಾಕ್ಕೆ, ನಮ್ಮ ನಿಮ್ಮೆಲ್ಲರ ಎ ಆರ್ ಸಾಯಿರಾಮ್ ಅವರು ಮೊದಲಿಗೆ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿ, ಸಿನಿಮಾ ರಂಗದಲ್ಲಿ ತುಂಬಾ ಏರು ಪೆರುಗಳನ್ನು ಕಂಡು, ಮತ್ತು ಕಷ್ಟ ಪಟ್ಟು ಈಗ ಇದೇ ಮೊದಲ ಬಾರಿಗೆ, ಅಶ್ವ ಚಿತ್ರಕ್ಕೆ ನಿರ್ದೇಶಕ ಆಗಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಇವರ ಈ ಅಶ್ವ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ, ಇದೆ ಪೋಸ್ಟರ್ ತುಂಬಾ ವೈರಲ್ ಆಗುತ್ತಿದೆ.
ಮತ್ತು ಸಿನಿಮಾದಲ್ಲಿ ನಾಯಕ ಆಗಿ ಉದಯೋನ್ಮುಖ ನಟ ಹೊಸ ಪ್ರತಿಭೆ "ವಿವಾನ್ ಕೆ ಕೆ" ಅವರು ನಟನೆ ಮಾಡುತ್ತಿದ್ದಾರೆ. ಮತ್ತು ನಾಯಕಿ ಆಗಿ ಸಾರಿಕಾ ಮತ್ತು ಸಾಗರಿಕ ಇಬ್ಬರೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಬಿ.ಅಜನೀಶ್ ಲೋಕನಾಥ್ ರವರ ಸಂಗೀತ , ರವಿಕುಮಾರ್ ಸನ ಅವರು ಕ್ಯಾಮರಾ ವರ್ಕ್, ಶ್ರೀಕಾಂತ ಗೌಡ ಸಂಕಲನ, ಹಾಗೂ ನೃತ್ಯ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು, ಮತ್ತು ತುಳಸಿ ರಾಮ್ ರಾಜ್ ಪ್ರಚಾರ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ..
Comments
Post a Comment