ಅಶ್ವ ಚಿತ್ರದ ನಾಯಕರಾದ ವಿವನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು...! ಈ ಸುದ್ದಿ ನೋಡಿ ನೀವು ಶುಭಾಶಯ ತಿಳಿಸಿ...!


 ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ಯುವ ಕಲಾವಿದರು ಸೇರಿಕೊಂಡು ಒಂದೋಳ್ಳೆ ಸಿನಿಮಾ ಮಾಡಲು ಮುಂದಾಗಿದ್ದು, ಸಿನಿಮಾ ಶೂಟಿಂಗ್ ಕೂಡ ಅರ್ಧದಷ್ಟು ಮುಗಿದಿದೆ, ಇನ್ನುಳಿದ ಭಾಗವನ್ನು ಚಿತ್ರತಂಡ ಗೋವಾದಲ್ಲಿ ಶೂಟಿಂಗ್ ಮಾಡಲು ಆಲೋಚನೆ ಮಾಡಿದ್ದು, ಇನ್ನೇನು ಸ್ವಲ್ಪ ದಿನದಲ್ಲಿ ಅದು ಕೂಡ ಮುಗಿದು, ಕೊರೊನ ಮುಗಿದ ಮೇಲೆ ಸಿನಿಮಾ ಬರಲಿದೆ ಎಂದಿದ್ದಾರೆ ಚಿತ್ರ ತಂಡದವರು.

ಎಸ್ ಇದರ ನಡುವೆ ಅಶ್ವ ಸಿನಿಮಾದ ನಾಯಕ ನಟ ವಿವನ್ ಅವರ ಹುಟ್ಟಿದ ದಿನ ಇಂದು, ಅವರು ಹೇಳಿದ ಹಾಗೆ ಅಶ್ವ ಎನ್ನುವ ಸಿನಿಮಾ ಎಲ್ಲರೂ ಹೊಸಬರನ್ನು ಸೇರಿಸಿಕೊಂಡು ಮಾಡುತ್ತಿರುವ ಸಿನಿಮಾ, ಹಾಗಾಗಿ ನನಗೂ ಕೂಡ ಮೊದಲಿನಿಂದಲೂ ಸಿನಿಮಾದಲ್ಲಿ ನಾಯಕ ಆಗಬೇಕು ಎಂಬುವ ಕನಸು ಇತ್ತು, ಅದೇ ರೀತಿ ಅಶ್ವ ಸಿನಿಮಾ ಮೂಲಕ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ ಎಂಬೆಲ್ಲ ಮಾತುಗಳನ್ನು ಆಡಿ, ವಿಶೇಷವಾಗಿ ಚಿತ್ರತಂಡದ ಜೊತೆ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರು ಎನ್ನಲಾಗಿದೆ. ಜೊತೆಗೆ ನಟ ವಿವನ್ ಅವರಿಗೆ ನೀವು ಕೂಡ ಹುಟ್ದಬ್ಬದ ಶುಭಾಶಯ ತಿಳಿಸಿ.


ಜೊತೆಗೆ ಅಶ್ವ ಸಿನಿಮಾಕ್ಕೆ, ಈ ಮುಂಚೆ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ಸಂಭಾಷಣೆಕಾರರಾಗಿ, ಕೆಲಸ ಮಾಡಿದಂತ ನಮ್ಮ ನಿಮ್ಮೆಲ್ಲರ ನೆಚ್ಚಿನ ಎ ಆರ್ ಸಾಯಿರಾಮ್ ಅವರು, ಮೊದಲ ಬಾರಿಗೆ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಾಯಕನಾಗಿ ವಿವನ್ ಕೆ ಕೆ ಅವರು ನಟನೆ ಮಾಡುತ್ತಿದ್ದಾರೆ. ಮತ್ತು ಚಿತ್ರತಂಡ ಇನ್ನೂ ನಾಯಕಿ ಹುಡುಕಾಟದಲ್ಲಿದ್ದು, ತಾರಾಗಣದಲ್ಲಿ ಸಾರಿಕಾ ಮತ್ತು ಸಾಗರಿಕ ರಿಚಿ  ನಾಗೇಂದ್ರ ಅರಸ್ , ಬಲರಾಜ್ವಾಡಿ, ಪವನ್ ಕುಮಾರ್(ಪಚ್ಚಿ), ,ಯಶ್ ಶೆಟ್ಟಿ ನಂದಗೋಪಾಲ್, ಸೂರಿ ಹಾಗೂ ಮತ್ತಿತರ ತಾರಾಬಳಗವಿದೆ ಎಂದು ತಿಳಿದುಬಂದಿದೆ,

ಮತ್ತು ತುಳಸಿ ರಾಮ್ ರಾಜು ಅವರು ಚಿತ್ರಕ್ಕೆ ಕ್ರಿಯೇಟಿವಿಟಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ಬಿ.ಅಜನೀಶ್ ಲೋಕನಾಥ್ ರವರ ಸಂಗೀತ , ರವಿಕುಮಾರ್ ಸನ ಅವರು ಕ್ಯಾಮರಾ ವರ್ಕ್, ಮತ್ತು ಶ್ರೀಕಾಂತ ಗೌಡ ಸಂಕಲನ, ಹಾಗೂ ನೃತ್ಯ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು, ಜೊತೆಗೆ ಉಮೇಶ್ ಕೆ ಎನ್ ಅವರು ಕೂಡ, ಅಶ್ವ ಚಿತ್ರವನ್ನು ತುಂಬಾ ಗ್ರ್ಯಾಂಡ್ ಆಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ನಾಲ್ಕು ಸಿನಿಮಾ ಚಿತ್ರರಂಗಗಳ ಕಲಾವಿದರು ಈ ಅಶ್ವ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ..

Comments