ಹೌದು, ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನವಾಗಿ ಒಂದೋಳ್ಳೇ ಕಥೆ ಚಿತ್ರಕಥೆ ನಿರ್ದೇಶನದೊಂದಿಗೆ ಟೆಂಪರ್ ಎಂಬ ಚಿತ್ರದ ಜೊತೆಗೆ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವ ಮಂಜು ಕವಿ ಅವರು ಅದ್ಭುತವಾದ ಕಥೆಯನ್ನು ಮಾಡಿಕೊಂಡು, ನಮ್ಮ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತು ಈ ಚಿತ್ರಕ್ಕೆ ಇವರೇ ಒಟ್ಟು ಐದು ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿ, ನಮ್ಮ ಕನ್ನಡ ನಟ ಶರಣ್ ಹಾಗೂ ಶಿವಣ್ಣ ಅವರಿಗೆ ಹಾಡಿರುವ ಗಾಯಕ ಆಂತೋನಿ ದಾಸ್ ಮತ್ತು ಶ್ವೇತಾ ಪ್ರಭು ಆರ್ ಮಹೇಂದರ್, ಮತ್ತು ಸುಪ್ರಿಯಾ ಸಂತೋಷ್ ವೆಂಕಿ ಅನುರಾಧ ಭಟ್ ಹಾಡಿರುವ ಹಾಡುಗಳಿಗೆ ಅದ್ಭುತವಾದ ಸಂಗೀತವನ್ನು ಸಹ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೆ ಆರ್ ಹರಿಬಾಬು ಅವರು ಸಿನಿಮಾಕ್ಕೆ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಅತ್ತ ವಿ ವಿನೋದ್ ಕುಮಾರ್ ಬಿ ಮೋಹನ್ ಬಾಬು .ಇನ್ನು ಬಾಲನಟನಾಗಿ ಮಾಸ್ಟರ್ ಪವನ್ ಮೊರೆ ಅವರು ಕೂಡ, ಅದ್ಭುತವಾಗಿ ನಮ್ಮ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಖಡಕ್ಕಾಗಿ ನಟ ಆರ್ಯನ್ ಸೂರ್ಯ ಮೊಟ್ಟ ಮೊದಲ ಬಾರಿಗೆ ಹೊಸದಾಗಿ ಬೆಳ್ಳಿ ತೆರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಚಿತ್ರಕ್ಕೆ ನಾಯಕಿಯಾಗಿ ಕಾಶಿಮ ಅವರು ಅಭಿನಯ ಮಾಡಿದ್ದಾರೆ ಎನ್ನಲಾಗಿದೆ.
ಮತ್ತು ಖ್ಯಾತ ನಟರಾದ ತಬಲಾನಾಣಿ, ನಮ್ಮ ಹಾಸ್ಯ ಹಿರಿಯ ನಟ ಟೆನಿಸ್ ಕೃಷ್ಣ, ಯತಿರಾಜ್, ಸುಧಾ, ಬೆಳವಾಡಿ ಬಾಲರಾಜ್, ಮಾಡಿ ರಾಗ ಚಿತ್ರದ ನಿರ್ಮಾಪಕ ಹಾಗೂ ಖ್ಯಾತ ನಟರಾದ ಮಿತ್ರ ಹಾಗೂ ಮಜಾ ಟಾಕೀಸ್ ಖ್ಯಾತಿಯ ಪವನ್ ಅವರು ಸಹ, ಅಭಿನಯ ಮಾಡಿದ್ದು, ಅನೇಕ ತಾರಾ ಬಳಗವೇ ಸಿನಿಮಾದಲ್ಲಿ ಇದ್ದು, ಇದೆ ನಾಯಕನ ಸ್ನೇಹಿತರಾಗಿ ಮಜಾ ಟಾಕೀಸ್ ಪವನ್ ಹಾಗೂ ಧನುಷ್ ಅಭಿನಯಿಸಿದ್ದಾರೆ ಎನ್ನಲಾಗಿದೆ..
ಸಿನಿಮಾದಲ್ಲಿ ನಾಯಕ ಒಂದು ಗ್ಯಾರೇಜನ್ನು ಇಟ್ಟುಕೊಂಡು ಜೀವನ ನಡೆಸುತ್ತಿರುತ್ತಾರೆ, ಮಧ್ಯದಲ್ಲಿ ಒಬ್ಬ ಶ್ರೀಮಂತ ಹುಡುಗಿಯ ಜೊತೆ ಕ್ರಶ್ ಆಗುತ್ತದೆ. ತದನಂತರ ನಂತರ ಅದನ್ನು ಸ್ನೇಹಿತರೊಂದಿಗೆ ಅಪ್ಪ ಅಮ್ಮನೊಂದಿಗೆ ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಒಂದು ಟ್ವಿಸ್ಟ್ಹಾಗೆ ಮೋಷನ್ ಪೋಸ್ಟರ್ ನ್ನು ಅದ್ಭುತವಾಗಿ ತೋರಿಸಿ ಛಾಪು ಮೂಡಿಸಿದ್ದಾರೆ ತುಳಸಿ ರಾಮರಾಜ್. ಇನ್ನು ಚಿತ್ರಕ್ಕೆ ಛಾಯಾಗ್ರಾಹಕ
ರಾಗಿ ಆರ್ ಕೆ ಶಿವಕುಮಾರ್ ಅವರು ಕಾರ್ಯನಿರ್ವಹಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಜೊತೆಗೆ ಟೆಂಪರ್ ಸಿನಿಮಾಕ್ಕೆ ನಮ್ಮ ಸ್ಯಾಂಡಲ್ ವುಡ್ ಖ್ಯಾತಿಯ ಸಂಕಲನಕಾರ, ಬಿಎಸ್ ಕೆಂಪರಾಜ್ ಕಾರ್ಯನಿರ್ವಹಿಸಿದ್ದಾರೆ ಎನ್ನಲಾಗಿದೆ. ಮತ್ತು ಇನ್ನು ನೃತ್ಯ ಸಂಯೋಜಕರಾಗಿ, ಅತ್ತ ಇಮ್ರಾನ್ ಸರ್ದಾರಿಯ.ಜಗ್ಗು ಮೈಸೂರು ರಾಜು ಮೈಸೂರು ಪ್ರೇಮ್ ವಹಿಸಿಕೊಂಡಿದ್ದಾರೆ. ಈ ಚಿತ್ರದ ಫುಲ್ ಪಬ್ಲಿಸಿಟಿಯನ್ನು ಯುವಿ ಡಿಜಿಟಲ್ ಪ್ರಮೊಷನ್ ಸಂಸ್ಥೆಯ ಉಮೇಶ್ ಕೆ ಎನ್ ವಹಿಸಿ ಕೊಂಡಿದ್ದು. ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಹಾಗೂ ಇನ್ನೇನು ಅತೀ ಶೀಘ್ರದಲ್ಲಿ ಸಿನಿಮಾ ಥಿಯೇಟರ್ ಗೆ ಬರಲಿದೆ, ಹಾಗಾಗಿ ಚಿತ್ರತಂಡ ಕೊರೊನ ಕಾಯಿಲೆ ಹೋಗುವುದನ್ನೇ ಎದುರು ನೋಡುತ್ತಿದ್ದು. ಸಿನಿಮಾ ಬೇಗ ಬಿಡುಗಡೆ ಮಾಡಲು ಕಾಯುತ್ತಿದ್ದಾರೆ ಎಂದು ಮಾದ್ಯಮ ಒಂದಕ್ಕೆ ಹೇಳಿದ್ದಾರೆ..
Comments
Post a Comment