ರಾಜೇಶ್ & ದೇವಿ ಫಿಲ್ಮ್ಸ್ ಸಂಸ್ಥೆಯಡಿಯಲ್ಲಿ ನಿರ್ಮಾಪಕರಾದ ಯೋಗೇಶ್ ಗೌಡ ಮಾಯಗಾನಹಳ್ಳಿ, ಸಹಾ ನಿರ್ಮಾಪಕರಾದ ನರಸಿಂಹ ಮೂರ್ತಿ (ನರ್ಸಿ)ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ "ಅಲೆವ ಮೋಡ" ತ್ರಿಮೂರ್ತಿಗಳ ಮಡಿಲಿನಿಂದ ತಲೆದೂಗೋ ಹಾಡು ಮನೋ ಮೂರ್ತಿ , ಜಯಂತ್ ಕಾಯ್ಕಿಣಿ, ಸೋನು ನಿಗಮ್ ಅವರು ಸೇರಿ, ಮೌನ ಧ್ಯಾನ ಮೀರಿದ ಸೊಗಸನ್ನು ಸಂಗೀತದಲ್ಲಿ ಕನ್ನಡ ಸಿನಿ ರಸಿಕರಿಗೆ ಉಣಬಡಿಸಿದ್ದ ಸಂಗೀತ ನಿರ್ದೇಶಕ ಮನೋಮೂರ್ತಿ, ಹೌದು ಮನೋ ಮೂರ್ತಿಯವರ ಬತ್ತಳಿಕೆ ಇಂದ ಮತ್ತನ್ನು ಹಾಡೊಂದು ಹೊತ್ತು ತಂದಿದೆ, ಸೋನು ನಿಗಮ್ ರವರ ಗಾಯನದಲ್ಲಿ.
ಅಲೆವ ಮೋಡದ ಹಾಡು ಸೋನು ನಿಗಮ್ ಅವರ ಈ ವರ್ಷದ ಮೊದಲ ಕನ್ನಡ ಹಾಡು ಎನ್ನಬಹುದು. ಅನೇಕ ವರ್ಷಗಳಿಂದ, ಸೋನು ನಿಗಮ್ ರವರ ಧ್ವನಿ ಕನ್ನಡ ಚಲನಚಿತ್ರದ ಹಾಡುಗಳಲ್ಲಿ ಕಡ್ಡಾಯವಾಗಿ ಇರುತ್ತಿತ್ತು ಆದರೆ, ಕಳೆದ ಒಂದೆರಡು ವರ್ಷಗಳಲ್ಲಿ, ಅವರ ಹಾಡುಗಳ ಸಂಖ್ಯೆ ಕಡಿಮೆ ಆಗುವುದನ್ನು ನೀವು ಗಮನಿಸಬಹುದು, ಅವರು ಸ್ಯಾಂಡಲ್‌ವುಡ್‌ನಲ್ಲಿರುವ ಎಲ್ಲಾ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಮನೋ ಮೂರ್ತಿಯವರ ಜೊತೆಗಿನ ಹಾಡುಗಳದ್ದೆ ಮೇಲುಗೈ ಎದ್ದು ಕಾಣುಸುತ್ತೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಮುಂಗಾರು ಮಳೆ, ಈ ಬಂಧನ, ಚೆಲುವಿನ ಚಿತ್ರಾ, ಮಿಲನ, ಮನಸಾರೆ, ಮಾಧ ಮತ್ತು ಮನಸಿ, ಗೊಕುಲಾ,
ಮತ್ತು ಪಾರಿಜಾತ ಇನ್ನು ಮುಂತಾದ ಚಿತ್ರಗಳಲ್ಲಿ ಇವರಿಬ್ಬರು ಗಮನಾರ್ಹವಾಗಿ ಕೆಲಸ ಮಾಡಿದ್ದಾರೆ. ಅವರ ಕೆಲವು ಹಿಟ್ ಸಾಂಗುಗಳಲ್ಲಿ ಅನಿಸುತ್ತದೆ (ಮುಂಗಾರು ಮಳೆ), ಕನಸೊ ಇದು (ಚೆಲುವಿನ ಚಿತ್ತಾರ), ನಿನ್ನಿಂದಲೇ ನಿನ್ನಿಂದಲೇ (ಮಿಲನ), ಆರಾಮಾಗಿ(ಗೊಕುಲಾ) ಮುಂತಾದವು ಸೇರಿವೆ. ಈ ಅನೇಕ ಹಿಟ್ ಸಾಂಗುಗಳನ್ನು ಸಾಹಿತಿ ಜಯಂತ್ ಕಾಯ್ಕಿಣಿಯವರು ಬರೆದಿದ್ದಾರೆ ಅನ್ನೋದು ವಿಶೇಷ. ಈಗ, ಈ ತ್ರಿಮೂರ್ತಿಗಳು ಮತ್ತೆ "ಅಲೆವ ಮೋಡ" ಸಿನಿಮಾದ ಮೂಲಕ ಒಂದಾಗಿದ್ದಾರೆ ಎನ್ನಬಹುದು.
ಈ ಚಿತ್ರವನ್ನು ಸತೀಶ್ ಪ್ರಧಾನ್ ನಿರ್ದೇಶಿಸಿದ್ದಾರೆ, ಇವರು ಈ ಮೊದಲು ಪೂಜಾ ಗಾಂಧಿಯವರೊಂದಿಗೆ ಅಭಿನೇತ್ರಿ, ಪ್ರಜ್ವಲ್ ದೇವರಾಜ್ ಜೊತೆಗೆ ಮಾಧ ಮತ್ತು ಮಾನಸಿ ಚಿತ್ರಗಳನ್ನು ನಿರ್ದೇಶಿಸಿದ್ದರು ಎಂದು ತಿಳಿದುಬಂದಿದೆ. ಉಳಿದಂತೆ ಚಿತ್ರದಲ್ಲಿ ಶಿಶಿರ್ ಶಾಸ್ತ್ರಿ, ಪ್ರಿಯಾಂಕ ಚಿಂಚೋಲಿ, ಶುಭ ಪೂಂಜ, ವಿಜಯಲಕ್ಷ್ಮಿ, ವೀಣಾ ಸುಂದರ್, ಪವನ್ ಕುಮಾರ್, ವಿ.ಮನೋಹರ್, ಶೋಭರಾಜ್, ಮಂಡ್ಯ ರಮೇಶ್, ಮೈಕೋ ನಾಗರಾಜ್, ಅರಸು, ಮೋಹನ್ ಜುನೇಜ, ಡ್ಯಾನಿ ಕುಟ್ಟಪ್ಪ ಇನ್ನೂ ಮುಂತಾದ ತರಗಣವಿದೆ.
ಚಿತ್ರಕ್ಕೆ ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣ, ಮತ್ತು ಅತ್ತ ಎ. ಆರ್.ಸಾಯಿರಾಮ್ ಅವರ ಸಂಭಾಷಣೆ, ಅರ್ಜುನ್ ಕಿಟ್ಪು ಅವರ ಸಂಕಲನ, ವಿಕ್ರಮ್ ಮೊರ್ ಅವರ ಸಾಹಸ ಸಂಯೋಜಿಸಿದ್ದಾರೆ ಹಾಗೂ, ಬಿ. ಧನಂಜಯ, ಮತ್ತು ಮೋಹನ್, ನೃತ್ಯ ಸಂಯೋಜನೆ ಮಾಡಿದ್ದಾರೆ, ಅರ್ಜುನ್ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಚಮತ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರತಂಡವು ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ಚಿತ್ರ ಸೊಗಸಾಗಿ ಮೂಡಿ ಬಂದಿದ್ದು, ಅತೀ ಶೀಘ್ರದಲ್ಲಿ ಉಳಿದ ಹಾಡುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.
ಅಳೆವ ಮೋಡ ಅವಳು, ಹಾಡು ನೀವು ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ, ಇಷ್ಟ ಆದ್ರೆ ಶೇರ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ ಧನ್ಯವಾದಗಳು...
Comments
Post a Comment