ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರಿಂದ ಕಬ್ಜ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ..! ಯಾವಾಗ ಗೊತ್ತಾ..?



ಹೌದು ಕನ್ನಡ ಸಿನಿಮಾರಂಗದ ಬಹುನಿರೀಕ್ಷಿತ ಚಿತ್ರ, ಉಪೇಂದ್ರ ಅವರ ಅಭಿನಯದ ಮತ್ತು ಆರ್ ಚಂದ್ರು ಅವರ ನಿರ್ದೇಶನದ ಕಬ್ಜ ಸಿನಿಮಾ, ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ದಿನದಿಂದ ದಿನಕ್ಕೆ ತನ್ನದೇ ಕ್ರೇಜ್ ಅನ್ನು ಹುಟ್ಟು ಹಾಕಿದೆ. ಹೌದು ಸೂಪರ್ ಸ್ಟಾರ್ ಉಪೇಂದ್ರ ಅವರು ನಟಿಸುತ್ತಿರುವ ಮತ್ತು ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಬ್ಜ ಸಿನಿಮಾದ ಥೀಮ್ ಪೋಸ್ಟರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ..


ಭಾರತ ದೇಶದ ಬಹು ನಿರೀಕ್ಷಿತ ಚಿತ್ರ ಕಬ್ಜ ಸಿನಿಮಾ, ಈಗಾಗಲೇ ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶಾದ್ಯಂತ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಚಿತ್ರ ಕೂಡ ಇದಾಗಿದೆ. ಮತ್ತು ಮೊನ್ನೆಯಷ್ಟೇ ಕಬ್ಜ ಸಿನಿಮಾದ ವೆಬ್ಸೈಟ್ ಲಾಂಚ್ ಕೂಡ ಆಗಿದ್ದು, ನಮ್ಮ ಕನ್ನಡ ಸಿನಿಮಾರಂಗದ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಇದೆ ವೆಬ್ಸೈಟ್ ಲಾಂಚ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಇದರ ನಡುವೆ ಇದೇ ತಿಂಗಳು 17 ನೇ ತಾರೀಕು ಕಬ್ಜ ಸಿನಿಮಾದ ಥೀಮ್ ಪೋಸ್ಟರ್ ಕೂಡ ಬಿಡುಗಡೆಯಾಗಲಿದೆ ಎಂದು ಕೇಳಿ ಬಂದಿದೆ..


ಆದರೆ ಈ ಥೀಮ್ ಪೋಸ್ಟರನ್ನು ಯಾರು ಬಿಡುಗಡೆ ಮಾಡುತ್ತಿದ್ದಾರೆ ಗೊತ್ತಾ ? ಮುಂದೆ ಓದಿ. ಎಸ್ ನಮ್ಮ ಭಾರತ ಸಿನಿಮಾರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು , ನಿರ್ದೇಶಕ ಚಂದ್ರು ಅವರ ಕಬ್ಜ ಸಿನಿಮಾದ ಥೀಮ್ ಪೋಸ್ಟರ್ ಅನ್ನು ಇದೇ 17ನೇ ತಾರೀಕು ಸಾಯಂಕಾಲ 5:00 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 


ಮತ್ತು ನೀವು ಕೂಡ ಕಬ್ಜ ಸಿನಿಮಾಗಾಗಿ ಕಾಯುತ್ತಿದ್ದರೆ, ತಪ್ಪದೆ ಕಾಮೆಂಟ್ ಮಾಡಿ ,ಮತ್ತು ಕಬ್ಜ ಸಿನಿಮಾ ಅಪ್ಡೇಟ್ಸ್ ಗಾಗಿ ಮೊನ್ನೆಯಷ್ಟೆ ಲಾಂಚ್ ಆಗಿರುವ ವೆಬ್ಸೈಟ್ ಮೂಲಕ ಎಲ್ಲ ಮಾಹಿತಿ ಪಡೆದುಕೊಳ್ಳಿ ಧನ್ಯವಾದಗಳು....


Comments