ಖ್ಯಾತ ನಿರ್ದೇಶಕ ಆರ್ ಜಿವಿ ಅವರಿಂದ ಕಬ್ಜ ಚಿತ್ರದ ಥೀಮ್ ಪೋಸ್ಟರ್ ಲಾಂಚ್..!

 


 ಭಾರತ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿನಯದ ಮೂಲಕ, ಮತ್ತು ತುಂಬಾ ಕ್ರಿಯೇಟಿವ್ ನಿರ್ದೇಶಕರಾಗಿ, ಭಾರತ ಸಿನಿಮಾರಂಗದಲ್ಲಿ ಹೆಚ್ಚು ಹೆಸರು ಮಾಡಿರುವ, ಮತ್ತು ಕನ್ನಡ ಸಿನಿಮಾರಂಗದಲ್ಲಿಯೂ ಇಂತಹ ಟ್ಯಾಲೆಂಟ್ ನಿರ್ದೇಶಕರಿದ್ದಾರೆ ಎಂದು ಭಾರತದಾದ್ಯಂತ ತೋರಿಸಿಕೊಟ್ಟ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ,ಬಹುನಿರೀಕ್ಷಿತ ಕಬ್ಜ ಚಿತ್ರ, ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಚಿತ್ರಕ್ಕೆ ಬಹುಬೇಡಿಕೆ ನಿರ್ದೇಶಕ ಆರ್ ಚಂದ್ರು ಅವರು ಆಕ್ಷನ್ ಕಟ್ ಹೇಳಿದ್ದಾರೆ..


ಕಬ್ಜ ಚಿತ್ರ ಆರಂಭದಿಂದಲೂ ಕೂಡ ಸಕ್ಕತ್ ಸೌಂಡ್ ಮಾಡುತ್ತಲೇ ಇಡೀ ದೇಶಾದ್ಯಂತ ಸಾಕಷ್ಟು ಅಭಿಮಾನಿಗಳಿಗೆ ಹುಚ್ಚು ಹಿಡಿಯುವ ರೀತಿಯಲ್ಲಿ ತನ್ನ ಕೆಲಸ ಮಾಡುತ್ತಾ ಬಂದಿದೆ. ಮತ್ತು ಈಗಾಗಲೇ ನಾವು ನೀವು ನೋಡಿದ ಹಾಗೆ ಕಬ್ಜ ಸಿನಿಮಾದ ಕೆಲ ಸ್ಟಿಲ್ಸ್ ನೋಡಿದರೆ ಗೊತ್ತಾಗುತ್ತದೆ ,ಸಿನಿಮಾ ಯಾವ ಮಟ್ಟದಲ್ಲಿ ಮತ್ತು ಎಷ್ಟು ಪ್ರಬಲವಾಗಿ, ಒಂದು ನೂತನ ಪ್ರಯತ್ನದ ಮೂಲಕ ತೆರೆಮೇಲೆ ರಾರಾಜಿಸಬಹುದೆಂದು, ಜೊತೆಗೆ ದೇಶಾದ್ಯಂತ ಇನ್ನೊಂದು ಮೈಲುಗಲ್ಲು ಸಾಧಿಸುವ ಹಾಗೆ ಕಾಣುತ್ತಿದೆ ಇದೆ ಕಬ್ಜ ಸಿನಿಮಾ. 

ಭಾರತ ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇಂದು ಕಬ್ಜ ಸಿನಿಮಾದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಮತ್ತು ಸೂಪರ್ ಸ್ಟಾರ್ ಉಪೇಂದ್ರ ಅವರ ಹುಟ್ಟು ಹಬ್ಬಕ್ಕೆ ಭರ್ಜರಿ ಉಡುಗೊರೆಯಾಗಿ, ಕಬ್ಜ ಚಿತ್ರತಂಡ ಸಿನಿಮಾದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದೆ.ಮತ್ತು ಬಹುನಿರೀಕ್ಷಿತ ಚಿತ್ರ ಕಬ್ಜ ಸಿನಿಮಾಗಾಗಿ ನೀವು ಕಾಯುತ್ತಿದ್ದರೆ, ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ,ಚಿತ್ರತಂಡಕ್ಕೆ ಮತ್ತು ಆರ್ ಚಂದ್ರು ಅವರಿಗೆ ಮತ್ತು ಉಪೇಂದ್ರ ಅವರಿಗೆ ಶುಭಾಶಯ ತಿಳಿಸಿ ಧನ್ಯವಾದಗಳು...



Comments