'ಒಂದು ದಿನ ಒಂದು ಕ್ಷಣ' ಚಿತ್ರದ ಪ್ರಮುಖ ಪಾತ್ರಧಾರಿ ಶಶಿ ಶೇಖರ್ ತಮ್ಮ ಸಿನಿಮಾ ಬಗ್ಗೆ ಹೇಳಿದ್ದೇನು ಗೊತ್ತಾ.?


ಹೌದು ಕೊರೊನ ಬರುವ ಮುಂಚೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಹೊಸ ಕಲಾವಿದರ,ಹೊಸ ಸಿನಿಮಾಗಳು ಹೆಚ್ಚು ಯಶಸ್ವಿಯಾಗುತ್ತಿದ್ದು, ಇದೇ ನಿಟ್ಟಿನಲ್ಲಿ ಈಗ ಮಾಧ್ಯಮವೊಂದರ ಮೂಲಕ ನಮಗೆ ತಿಳಿದು ಬಂದಿರುವ ಹಾಗೆ, 'ಒಂದು ದಿನ ಒಂದು ಕ್ಷಣ' ಸಿನಿಮಾ ಮತ್ತು 'ಪಂಖುರಿ' ಎನ್ನುವ ಹೊಸ ಚಿತ್ರಗಳು ಕೂಡ ಅದೇ ಸಾಲಿಗೆ ಸೇರುವಂತೆ ಕಾಣುತ್ತಿವೆ. ಹೌದು ಈ ಎರಡು ಚಿತ್ರಗಳಲ್ಲಿ ಹೆಣ್ಣಿನ ಕಥೆಯನ್ನಾರಿಸಿಕೊಂಡು ಸಿನಿಮಾ ಮಾಡಿದ್ದಾರೆ ಎಂಬುದಾಗಿ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪಾತ್ರ  ಪಾತ್ರಧಾರಿ ಶಶಿ ಶೇಖರ್ ಅವರು ಮಾತನಾಡಿದ್ದಾರೆ. ಹೌದು ಪಂಖುರಿ ಎನ್ನುವ ಸಿನಿಮಾ ಕೂಡ ಹೆಣ್ಣಿನ ಮೇಲೆ ದೇಶದಲ್ಲಿ ಆಗುತ್ತಿರುವ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಸಿನಿಮಾ ಮೂಡಿಬರಲಿದೆ ಎಂಬುದಾಗಿ ತಿಳಿದುಬಂದಿದೆ.


ಜೊತೆಗೆ ಒಂದು ದಿನ ಒಂದು ಕ್ಷಣ ಕೂಡ 'ಫೀಮೇಲ್' ಮೇಲೆ ಸಿನಿಮಾ ಕಥೆ ಮೂಡಿಬಂದಿದೆಯಂತೆ. ಮತ್ತು ಪಂಕುರಿ ಸಿನಿಮಾದಲ್ಲಿ ಪ್ರಮುಖ ಪಾತ್ರದಾರಿ 'ಶಶಿ ಶೇಖರ್' ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದರ ನಡುವೆ ಈ ವರ್ಷ ಕೋರೋನ ಬಂದ ಕಾರಣದಿಂದ ಈ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ ಎಂಬುದಾಗಿ ಸಿನಿಮಾ ತಂಡ ಹೇಳಿ, ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಬಿಡುಗಡೆ ಮಾಡುವುದಾಗಿ ಈ ಮುಂಚೆ ಮಾಧ್ಯಮಗಳ ಬಳಿ ಶಶಿಶೇಖರ್ ಅವರು ಮಾತನಾಡಿದ್ದರು.

ಜೊತೆಗೆ ಎರಡು ಸಿನಿಮಾಗಳು ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಮತ್ತು ಹೊಸಬರನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದು, ಒಂದು ಒಳ್ಳೆ ಹೊಸತನ ತಂದಿದೆ ಎಂದು, ಸಿನಿಮಾ ಬಗ್ಗೆ ಖುಷಿ ಹಂಚಿಕೊಂಡರು. ಜೊತೆಗೆ ಶಶಿಶೇಖರ್ ಅವರು ಕನ್ನಡ ಕೆಲ ಚಿತ್ರಗಳಿಗೆ ಮತ್ತು ಕೆಲ ಸೀರಿಯಲ್ಗಳಿಗೆ ತಮ್ಮದೆಯಾದ ಕಾರ್ಯ ನಿರ್ವಹಿಸಿದ್ದು, ಕೆಲ ಸಿನಿಮಾಗಳಿಗೆ ನಿರ್ಮಾಪಕರು ಕೂಡ ಆಗಿದ್ದಾರಂತೆ. ಈ ಹೊಸ ತಂಡಕ್ಕೆ ಮತ್ತು ಶಶಿಶೇಖರ್ ಅವರಿಗೆ ಈ ಎರಡು ಸಿನಿಮಾಗಳಲ್ಲಿ ಯಶಸ್ವಿ ಸಿಗಲಿ ಎಂದು ಕಾಮೆಂಟ್ ಮಾಡಿ ಮತ್ತು ಶುಭ ಹಾರೈಸಿ ಧನ್ಯವಾದಗಳು...

Comments