ದೀಪಾವಳಿ ಪ್ರಯುಕ್ತ ಉಪ್ಪಿ ಅಭಿಮಾನಿಗಳಿಗೆ ಇಲ್ಲಿದೆ ಇನ್ನೊಂದು ಸಿಹಿ ಸುದ್ದಿ..! ಅದೇನ್ ಗೊತ್ತಾ..?

 


ನಮ್ಮ ಸ್ಯಾಂಡಲ್ ವುಡ್ ನ, ಬಹು ನಿರೀಕ್ಷಿತ ಕಬ್ಜ ಚಿತ್ರತಂಡದಿಂದ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೌದು ಕಬ್ಜ ಚಿತ್ರತಂಡ ಇಲ್ಲಿಯವರೆಗೆ, ತನ್ನ ಆರಂಭದ ಶೂಟಿಂಗ್ ನಿಂದಲೇ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಇಟ್ಟು ಕೊಳ್ಳುವ ಹಾಗೆ ಕಾಣಿಸಿದ್ದು, ಒಂದು ವಿಭಿನ್ನ ರೀತಿಯಲ್ಲಿ, ಭಾರತ ಸಿನಿಮಾರಂಗದಲ್ಲಿಯೇ, ಇಲ್ಲಿಯವರೆಗೂ ಯಾರೂ ನೋಡಿರದ, ವಿಶಿಷ್ಟ ನೈಜ ಕಥೆಯನ್ನು ಆದರಿಸಿಕೊಂಡು ಶೂಟಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.


ಹಾಗಾಗಿ ಕಬ್ಜ ಚಿತ್ರದ ಶೂಟಿಂಗ್ ಸ್ಟೀಲ್ಸ್ ನಲ್ಲಿ, ನಟ ಉಪೇಂದ್ರ ಅವರು, ನೋಡಲು ಸಕ್ಕತ್ತಾಗಿ, ಡಿಫರೆಂಟಾಗಿಯೇ ಕಾಣಿಸಿದ್ದಾರೆ. ಇದೆಲ್ಲ ನೋಡಿದರೆ ಈ ಸಿನಿಮಾ ಕೂಡ, ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಹೊಸ ಮೇಲುಗೈ ಸಾಧಿಸಬಹುದು ಎಂಬುದಾಗಿ ಕಾಣುತ್ತಿದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ, ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಕಬ್ಜ ಸಿನಿಮಾದ ಚಿತ್ರತಂಡವು, ಇದೀಗ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಮೋಷನ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.

ಹೌದು ಮೋಷನ್ ಪೋಸ್ಟರ್ ನೋಡುತ್ತಿದ್ದಂತೆ, ಈ ಸಿನಿಮಾದ ಮೇಲಿರುವ ನಿರೀಕ್ಷೆ ಇನ್ನಷ್ಟು ಹೆಚ್ಚುತ್ತಿದೆ ಎಂಬುದಾಗಿ ಉಪ್ಪಿ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹೌದು ನೀವು ಸಹ, ಕಬ್ಜ ಚಿತ್ರತಂಡ ಬಿಡುಗಡೆ ಮಾಡಿರುವ, ಮೋಷನ್ ಪೋಸ್ಟರ್ ಅನ್ನು ನೋಡಿ, ಬಳಿಕ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಹಾಗೆ ಪೋಸ್ಟರ್ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ, ಜೊತೆಗೆ ಚಿತ್ರತಂಡಕ್ಕೆ ಶುಭಾಶಯ ತಿಳಿಸಿ ಧನ್ಯವಾದಗಳು...

Comments