ಬಹುನಿರೀಕ್ಷಿತ ಕಬ್ಜ ಚಿತ್ರ ತಂಡದಿಂದ ಸಂಕ್ರಾಂತಿಗೆ ಹೊರ ಬೀಳಲಿದೆ ಭರ್ಜರಿ ನ್ಯೂಸ್..! ಅದೇನ್ ಗೆಸ್ ಮಾಡಿ

ಹೌದು ನಮ್ಮ ಸ್ಯಾಂಡಲ್ವುಡ್ನಲ್ಲಿ ಒಂದರಮೇಲೊಂದು ಸಾಕಷ್ಟು ಸಿನಿಮಾಗಳು ಬರುತ್ತಲೇ ಇವೆ. ಆದರೆ ಹೋದ ವರ್ಷ ಬಂದಂತಹ ಕೊರೊನದಿಂದಾಗಿ ಸಿನಿಮಾ ಕಾರ್ಯಗಳು ಸ್ಥಗಿತಗೊಂಡಿದ್ದವು, ಆದ್ರೂ ಕಬ್ಜ ಚಿತ್ರ ಸುದ್ದಿಯಲ್ಲೇ ಇತ್ತು. ಇದರ ಜೊತೆ ಕನ್ನಡದ ಹೆಮ್ಮೆಯ ಕೆಜಿಎಫ್ 2 ಟೀಸರ್ ಇತ್ತೀಚಿಗಷ್ಟೇ  ಬಿಡುಗಡೆಯಾಗಿದ್ದು, ಯೂಟೂಬ್ನಲ್ಲಿ 12 ಕೋಟಿ ವೀಕ್ಷಣೆ ಪಡೆದು ಇನ್ನೂ ಮುನ್ನುಗುತ್ತಿದೆ.ಇದರ ಜೊತೆ ನಮ್ಮ ಕನ್ನಡದ ಇನ್ನೊಂದು ಪ್ಯಾನ್ ಇಂಡಿಯಾ ಮೂವಿ ಬರುತ್ತಿದ್ದು, ಕಬ್ಜ ಹೆಸರಿನ ಮೂಲಕ ಇಡೀ ಇಂಡಿಯಾದಲ್ಲಿ ಸದ್ದು ಮಾಡಲು ರೆಡಿಯಾಗಿದೆ ನಿಂತಿದೆ ಎಂದು ಕೇಳಿಬಂದಿದೆ. 


ಹೌದು ಸ್ನೇಹಿತರೆ ಕನ್ನಡದ ಖ್ಯಾತ ನಿರ್ದೇಶಕ, ಆರ್ ಚಂದ್ರುರವರು, ಕಬ್ಜ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಕನ್ನಡದ ಸೂಪರ್ ಸ್ಟಾರ್ ಮಾತ್ರವಲ್ಲದೆ, ಇಡೀ ಭಾರತದ ತುಂಬೆಲ್ಲ ರಿಯಲ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ನಟ ಉಪೇಂದ್ರರವರು, ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ್ದು, ಪ್ಯಾನ್ ಇಂಡಿಯಾ ಇದೆ ಕಬ್ಜ ಮೂವಿಯನ್ನು ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಸೌಂಡ್ ಮಾಡಿಸುವಂತೆ ಚಿತ್ರತಂಡ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ. ಮತ್ತು ಇತ್ತೀಚೆಗಷ್ಟೇ ತನ್ನ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಕಬ್ಜ ಚಿತ್ರ ಒಂದರ ಮೇಲೊಂದಂತೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಲೆ ಬಂದಿದ್ದಾರೆ.


ಆದರೆ ಇನ್ನೂ ಕೂಡ ಟೀಸರ್ ಆಗಲಿ, ಟ್ರೈಲರ್ ಆಗಲಿ ಈ ಸಿನಿಮಾದಿಂದ ಬಂದಿಲ್ಲ. ಆದರೂ ಈ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಮಾಡುವಂತೆ ಮಾಡಿದೆ. ಹಾಗೇನೇ ಇದೆ ಜನವರಿ 14ರಂದು, ಸಂಕ್ರಾಂತಿ ಹಬ್ಬದ ದಿನ, ಕಬ್ಜ ಚಿತ್ರತಂಡದಿಂದ ಸರ್ಪ್ರೈಸ್ ಸುದ್ದಿ ಹೊರಬೀಳಲಿದ್ದು, ಸಿನಿರಸಿಕರು ಹಾಗೂ ಉಪೇಂದ್ರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಷ್ಟಕ್ಕೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಾವ ಸುದ್ದಿ ಈ ಕಬ್ಜ ಚಿತ್ರದಿಂದ ಬೀಳಬಹುದು ಎಂದು ಗೆಸ್ ಮಾಡಿ, ಕಮೆಂಟ್ ಮಾಡಿ. ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ, ಹಾಗೂ ಚಿತ್ರ ತಂಡಕ್ಕೆ ಶುಭಾಶಯ ಹೇಳಿ ಧನ್ಯವಾದಗಳು..



Comments