ಪ್ಯಾನ್ ಇಂಡಿಯಾ ಕಬ್ಜ ಸಿನಿಮಾದ ಹೊಸ ಪೋಸ್ಟರ್ ಲುಕ್ ನಲ್ಲಿ ಕಿಚ್ಚನ ಭರ್ಜರಿ ವೈಭವ..! ಪೋಸ್ಟರ್ ಹೇಗಿದೆ..?

ಹೌದು ಇಂದು ಬೆಳಿಗ್ಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ, ಪ್ಯಾನ್ ಇಂಡಿಯಾ ಕಬ್ಜಾ ಸಿನಿಮಾ ತಂಡದಿಂದ ಸರ್ಪ್ರೈಸ್ ವಿಷಯವೊಂದು ಹೊರಬಿದ್ದಿದ್ದು ಸಿನಿಮಾದ ನಿರ್ದೇಶಕ ಆರ್ ಚಂದ್ರು ಹಾಗೂ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ತಂಡಕ್ಕೆ ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಕಿಚ್ಚ ಸುದೀಪ್ ಅವರು ಕೂಡ ಎಂಟ್ರಿ ಯಾಗಿದ್ದು, ಬಾರ್ಗವ ಭಕ್ಷಿ ಎನ್ನುವ ಮುಖ್ಯ ಪಾತ್ರದಲ್ಲಿ ನಟ ಅಭಿನಯಿಸಲಿದ್ದಾರೆ. 

ಅಂದಹಾಗೆ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹೊರಬೀಳುತ್ತಿದ್ದ ಹಾಗೆ, ಕಿಚ್ಚನ ಅಭಿಮಾನಿಗಳು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಹೆಚ್ಚು ಪ್ರತಿಕ್ರಿಯೆ ನೀಡಿದ್ದು, ನಮ್ಮ ಕಬ್ಜ ಸಿನಿಮಾವನ್ನು ಆದಷ್ಟು ಬೇಗನೆ ನೋಡಲೇಬೇಕು, ಹಾಗೂ ಇನ್ನೊಂದು ಕೆಜಿಎಫ್ ರೀತಿಯ ಅನುಭವವನ್ನು ಈ ಸಿನಿಮಾ ಪಕ್ಕಾ ನೀಡುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಹಾಗೆ ಇಡೀ ಭಾರತ ಮಾತ್ರವಲ್ಲದೆ ಹಾಲಿವುಡ್ ರೇಂಜಿನಲ್ಲಿ ಈ ಸಿನಿಮಾ ಮೂಡಿಬರುವುದು ಖಚಿತವಾಗಿದೆ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. 

ಏನೇ ಇರಲಿ ನಮ್ಮ ಕನ್ನಡದ ಇನ್ನೊಂದು ಸಿನಿಮಾ, ಅತ್ತ ಇಂಟರ್ನ್ಯಾಷನಲ್ ನಲ್ಲಿ ಸೌಂಡ್ ಮಾಡುತ್ತದೆ ಎಂದರೆ ಯಾರಿಗೆ ತಾನೆ ಖುಷಿ ಇರಲ್ಲ ಹೇಳಿ. ನೀವು ಈಗಾಗಲೇ ಕಬ್ಜಾ ಸಿನಿಮಾ ತಂಡದಿಂದ ಕಿಚ್ಚನ ಹೊಸ ಲುಕ್ಕಿನ ಪೋಸ್ಟರನ್ನು ನೋಡಿದ್ದೀರಾ ಅಲ್ವಾ, ಹಾಗಾದರೆ ಪ್ಯಾನ್ನ್ ಇಂಡಿಯಾ ಕಬ್ಜ ಸಿನಿಮಾದ ಬಗ್ಗೆ, ಹಾಗೇನೇ ಈ ರೀತಿ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಹಾಗೆ ಇಡೀ ಕಬ್ಜ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿ, ಈ ಮೇಲಿನ ಮಾಹಿತಿಯನ್ನು ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು...


Comments