ಕಬ್ಜ ಸೆಟ್ ಗೆ ಭಾರ್ಗವ್ ಬಕ್ಷಿಯಾದ ಕಿಚ್ಚನ ಎಂಟ್ರಿ..! ಸುದೀಪ್ ಭಾಗದ ಚಿತ್ರೀಕರಣ ಪ್ರಾರಂಭ..!


ಕನ್ನಡ ಸಿನಿಮಾರಂಗದಲ್ಲಿ ದೊಟ್ಟ ಮಟ್ಟದ ಮಲ್ಟಿ ಸ್ಟಾರ್ ಸಿನಿಮಾ ಆಗಿ ಕಬ್ಜ ಸಿನಿಮಾ ಸದ್ದು ಮಾಡುತ್ತಿದೆ.. ಈ ಕಬ್ಜ ಎಲ್ಲಾ ಭಾಷೆಗಳಲ್ಲೂ ಸಕ್ಕತ್ ಸೌಂಡ್ ಮಾಡುವ ಚಿತ್ರ ಆಗಲಿದೆ. ಕೆಜಿಎಫ್ ಬಳಿಕ ಇಡೀ ಭಾರತ ಚಿತ್ರರಂಗವೇ ಹೆಚ್ಚು ನೀರಿಕ್ಷೆ ಇಟ್ಟುಕೊಂಡಿರುವ ಕಬ್ಜ ಚಿತ್ರಕ್ಕೆ ಇದೀಗ ನಟ ಕಿಚ್ಚ ಅವರು ಆಗಮಿಸಿದ್ದಾರೆ. ಹಾಗೆ ಕಿಚ್ಚ ಸುದೀಪ್ ಅವರ ಭಾಗದ ಕಬ್ಜ ಸಿನಿಮಾದಲ್ಲಿಯ ಚಿತ್ರಿಕರಣ ಆರಂಭವಾಗಿದೆ. ಹೌದು ಇದೀಗ ನಟ ಕಿಚ್ಚ ಸುದೀಪ್ ಅವರ ಚಿತ್ರೀಕರಣದ ಭಾಗಕ್ಕೆ ಬೇಕಾಗಿರುವ ಎಲ್ಲಾ ಸೆಟ್ ಅನ್ನು ಕಬ್ಜ ಚಿತ್ರತಂಡ ನಿರ್ಮಾಣ ಮಾಡಿ ಚಿತ್ರಿಕರಣ ಮಾಡುತ್ತಿದೆ. 

ಹೌದು ನಟ ಉಪೇಂದ್ರ ಹಾಗೂ ನಟ ಕಿಚ್ಚ ಸುದೀಪ್ ಅವರು ಈಗಾಗಲೇ ಈ ಮುಂಚೆಯೇ ಒಟ್ಟಿಗೆ ಅಭಿನಯ ಮಾಡಿದ್ದು ಇದು ಎರಡನೇ ಬಾರಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಮುಕುಂದ ಮುರಾರಿ ಎಂಬ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ಅಭಿನಯಿಸಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಒಟ್ಟಿಗೆ ಕಬ್ಜದಲ್ಲಿ ಅಭಿನಯ ಮಾಡಿದ್ದಾರೆ.. ನಿರ್ದೇಶಕ ಆರ್ ಚಂದ್ರು ಅವರೆ ಈ ಕಬ್ಜ ಸಿನಿಮಾವನ್ನ ನಿರ್ಮಿಸುತ್ತಿದ್ದಾರೆ. ಹಾಗೆ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿ ರವಿ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹೌದು ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೆ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಅವರ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್ ಸಾಹಸ ನಿರ್ದೇಶನವಿರುವ ಈ ಕಬ್ಜ ಚಿತ್ರದ ತಾರಾಬಳಗದಲ್ಲಿ ನಟ ಉಪೇಂದ್ರ, ಸುದೀಪ್, ಕಾಮರಾಜನ್(ಐ ಮೂವಿ ಖ್ಯಾತಿ), ಟಾಲಿವುಡ್ ನಟ ಜಗಪತಿ ಬಾಬು, ಹಾಗೆ ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಯೊಂದು ಅಪ್ಡೇಟ್ ನಲ್ಲೂ ಹೆಚ್ಚು ಸುದ್ದಿ ಮಾಡುತ್ತಿದೆ ಈ ಕಬ್ಜ. ಹಾಗೆ ಈ ಕಬ್ಜ ಚಿತ್ರ ನಮ್ಮ ಹೆಮ್ಮೆಯ ಕನ್ನಡ ಚಿತ್ರವಾಗಿದೆ. ಈ ಚಿತ್ರ ಕೂಡ ನಮ್ಮ ಕನ್ನಡ ಸಿನಿಮಾರಂಗದ ಹೆಸರನ್ನು ಅತಿ ದೊಡ್ಡ ಮಟ್ಟಕ್ಕೆ ಕರೆದೊಯ್ಯಲಿ ಹಾಗೆ ನಮ್ಮ ಕನ್ನಡ ಇಂಡಸ್ಟ್ರಿಯ ಹೆಸರನ್ನ ಬೆಳಸಲಿ ಎಂಬುದೇ ನಮ್ಮ ಸಿನಿರಸಿಕರ ಆಶಯ....

Comments