ಹೊಸಬರ ಸಿನಿಮಾಗಳು ಕನ್ನಡ ಸಿನಿಮಾರಂಗದಲ್ಲಿ ಹೆಚ್ಚು ಈಗೀಗ ಹೊರಗಡೆ ಬರುತ್ತಿವೆ. ಅವರದೇ ಆದ ವಿಭಿನ್ನ ಅಭಿನಯದ ಮೂಲಕ ಹಾಗೂ ವಿಭಿನ್ನ ಕಥಾಹಂದರ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಹೊಸ ಪ್ರಯತ್ನದ ಮೂಲಕ ಸಿನಿಮಾ ಮಾಡೋಣ ಎಂದು ಬರುತ್ತಿದ್ದಾರೆ. ಹಾಗೆ ಮುಂದೆ ಬಂದ ಕಲಾವಿದರು ಯಶಸ್ವಿಯಾಗಿದ್ದಾರೆ ಕೂಡ. ಹೌದು ರೈಸಿಂಗ್ ಸ್ಟಾರ್ ದಕ್ಷ್ ಯುವ ನಾಯಕ ನಟ ನೇತ್ರಂ ಎನ್ನುವ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದು, ಈ ನೇತ್ರಂ ಎನ್ನುವ ಸಿನಿಮಾವನ್ನು ಬಿಲ್ಲೂರ್ ಸುರೇಶ್ ಅವರು ನಿರ್ಮಾಣ ಮಾಡುತ್ತಿದ್ದು, ಜೊತೆಗೆ ಸಿನಿಮಾ ನಿರ್ದೇಶಕರು ಕೂಡ ಇವರೇ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳೆದ ಎರಡು ವರ್ಷಗಳಿಂದ ಕರೋನ ಬೆನ್ನೆಲ್ಲೆ ಕನ್ನಡ ಸಿನಿಮಾರಂಗವೂ ಕೂಡ ಹೆಚ್ಚು ಸಮಸ್ಯೆ ಎದುರಿಸಿತ್ತು. ಲಾಕ್ಡೌನ್ ಸಮಸ್ಯೆ ಎದುರಿಸಿದ ವೇಳೆಯೇ ಕೆಲ ಯುವಕಲಾವಿದರು, ಯುವ ನಟರು ಹೊಸ ತಂಡಗಳ ಮೂಲಕವೆ ಓಟಿಟಿ ವೇದಿಕೆಯಲ್ಲಿ ಅವರ ಸಿನಿಮಾಗಳನ್ನ ಬಿಡುಗಡೆ ಮಾಡಿ ಯಶಸ್ವಿಯಾದರು. ಹೌದು ಇದೀಗ ನೇತ್ರಂ ಎನ್ನುವ ಹೊಸ ಚಿತ್ರತಂಡ ಈಗಾಗಲೇ ಭರ್ಜರಿ ತಯಾರಿ ನಡೆಸಿದೆ. ಇತ್ತೀಚಿಗಷ್ಟೇ ಚಿತ್ರತಂಡ ಚಿತ್ರದ ಮುಹೂರ್ತ ಕಾರ್ಯ ನೆರವೇರಿಸಿದ್ದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಬೆನ್ನಲ್ಲೇ ನೆತ್ರಂ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಇದೀಗ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ನಾಯಕನಟ ರೈಸಿಂಗ್ ಸ್ಟಾರ್ ದಕ್ಷ್ ಅವರು ಅದ್ಭುತವಾಗಿ ಮೋಷನ್ ಪೋಸ್ಟರ್ ಅಲ್ಲಿ ಕಾಣಿಸಿಕೊಂಡಿದ್ದಾರೆ.
ಈ ನೇತ್ರಂ ಸಿನಿಮಾಕ್ಕೆ ಬಿಲ್ಲೂರ್ ಸುರೇಶ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಪಕರಾಗಿ ಬಿಲ್ಲೂರ್ ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಸಹ ನಿರ್ಮಾಪಕರಾಗಿ ಮೊಕ್ತುಮ್ ಪಟೇಲ್, ಶೇಕ್ ಸಬೀರ್ ಅಬ್ಬು ಅವರು ಕಾರ್ಯ ನಿರ್ವಹಿಸಿದ್ದಾರೆ. ಹಾಗೆ ಶೀಲಾ ಹಾಗೂ ಮುದಾಸೀರ್ ಅವರು ನೇತ್ರಂ ಸಿನಿಮಾದಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಈ ಹೊಸಬರ ತಂಡಕ್ಕೆ ಶುಭಾಶಯ ತಿಳಿಸಿ, ಹಾಗೆ ಇದೀಗ ನೇತ್ರಂ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ನಡೀತಾ ಇದೆ. ನೇತ್ರಂ ಚಿತ್ರದ ಮೋಷನ್ ಪೋಸ್ಟರ್ ವಿಡೀಯೋ ನೋಡಿ....#Nethramkannadamovie #Nethram #RisingstarDaksh #Daksh
Comments
Post a Comment