ವರ್ಷದ ಬಹು ನಿರೀಕ್ಷಿತ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ಒಂದಾದ ಕಬ್ಜಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ನಟಿ ಶ್ರಿಯಾ ಸರನ್ ಮಾರ್ಚ್ 7 ರಂದು ಅವರ ಅಭಿಮಾನಿಗಳ ಮುಂದೆ ಭಾನುವಾರ ಘೋಷಿಸಿದರು. ಅಭಿಮಾನಿಗಳೊಂದಿಗೆ ಪ್ರಕಟಣೆಯನ್ನು ಹಂಚಿಕೊಂಡ ಶ್ರೀಯಾ ಹೀಗೆ ಬರೆದಿದ್ದಾರೆ: “ಕಬ್ಜಾ 1970 ರ ದಶಕದಲ್ಲಿ ನಡೆದ ಆಕ್ಷನ್ ಚಲನಚಿತ್ರವಾಗಿದೆ. ಈ ಚಲನಚಿತ್ರವು ಭಾರತದ ಇತಿಹಾಸದಲ್ಲಿ ಇದುವರೆಗೆ ಬಹಿರಂಗಪಡಿಸದ ಕ್ರೂರ ದರೋಡೆಕೋರನ ಪ್ರಯಾಣವನ್ನು ಚಿತ್ರಿಸುತ್ತದೆ. ನನಗೂ ಅದರ ಬಗ್ಗೆ ತಿಳಿಯುವ ಕುತೂಹಲವಿದೆ.. ಅಲ್ಲವೇ?” ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ಶ್ರೀಯಾ ಬರೆದಿದ್ದಾರೆ...
ಹೌದು ಕಬ್ಜ ಚಿತ್ರವನ್ನು ನಿರ್ದೇಶಕ ಆರ್ ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ. ಹಾಗೇನೇ ರವಿ ಬಸ್ರುರು ಅವರು ಸಿನಿಮಾಗೆ ಮ್ಯೂಸಿಕ್ ನೀಡಿದ್ದಾರೆ. ಪ್ಯಾನ್ ಇಂಡಿಯಾ ಕಬ್ಜ ಈಗಾಗಲೇ ಕುತೂಹಲ ಮೂಡಿಸಿದ್ದು ಯಾವಾಗ ಸಿನಿಮಾ ಬಿಡುಗಡೆ ಆಗುತ್ತದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಡಿಯಾದ ಖ್ಯಾತ ನಿರ್ದೇಶಕ ಹಾಗೂ ನಟ ಸೂಪರ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಈ ಕಬ್ಜ ಸಿನಿಮಾದಲ್ಲಿ ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸೌತ್ ಸಿನಿ ರಂಗದ ಇನ್ನೂ ಖ್ಯಾತ ಸ್ಟಾರ್ ನಟರುಗಳ ತಾರಾ ಬಳಗವಿದೆ. ನಟಿ ಕಾಜಲ್ ಅಗರ್ವಾಲ್, ಶ್ರೀಯಾ, ನಯನತಾರ ಅವರು ಸಹ ನಟನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕಬ್ಜ ಸಿನಿಮಾದಲ್ಲಿ ನಟಿ ಶ್ರೀಯಾ ಸರನ್ ಅವರು ಕೂಡ ಅಭಿನಯಿಸುತ್ತಿದ್ದು, ಶ್ರೇಯಾ ಅವರ ಮಧುಮತಿ ಪಾತ್ರದ ಹೊಸ ಪೋಸ್ಟರ್ ಮೊನ್ನೆ ಬಿಡುಗಡೆಯಾಯಿತು. ಪ್ಯಾನ್ ಇಂಡಿಯಾ ಕಬ್ಜಾ ಸಿನಿಮಾ ಅತಿ ದೊಡ್ಡ ಬಜೆಟ್ ಸಿನಿಮಾವಾಗಿ ಮೂಡಿ ಬರಲಿದೆ. ಕೆಜಿಎಫ್ ಬಳಿಕ ಇದು ಅತಿ ದೊಡ್ಡ ಹೈಪ್ ಕ್ರಿಯೇಟ್ ಮಾಡುತ್ತದೆ ಎಂದು ಸಿನಿ ತಜ್ಞರು ಹೇಳುತ್ತಿದ್ದಾರೆ. ಹೌದು ಈ ಖುಷಿ ವಿಚಾರವನ್ನು ನಟಿ ಶ್ರೀಯಾ ಸರನ್ ಅವರು ಹೇಳಿಕೊಂಡಿದ್ದು ಜೊತೆಗೆ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರು ಅವರ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆ ಖ್ಯಾತ ಕನ್ನಡ ನಟರುಗಳಾದ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರ ಜೊತೆ ಅಭಿನಯ ಮಾಡಲು ತುಂಬಾ ಖುಷಿಯಾಗುತ್ತಿದೆ ಎಂದು ಇನ್ಸ್ಟಾದಲಿ ಬರೆದುಕೊಂಡಿದ್ದಾರೆ. ಹೌದು ಈ ನಟರೊಂದಿಗೆ ಕೆಲಸ ಮಾಡಲು ತುಂಬಾ ಸಂತೋಷವಾಗಿದೆ…. ಇದೊಂದು ಅದ್ಭುತ ಚಿತ್ರವಾಗಲಿದೆ. ” ಎಂದಿದ್ದಾರೆ ನಟಿ ಶ್ರೀಯಾ...
Comments
Post a Comment