ಹೌದು ಇತ್ತೀಚಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ನಲ್ಲಿ ಲವ್ ಮಾಕ್ಟೈಲ್-2 ಸಿನಿಮಾ ಭರ್ಜರಿಯಾಗಿ ಹಿಟ್ ಆಗಿದೆ. ಕೋವಿಡ್ ನಡುವೆ ಲವ್ ಮಾಕ್ಟೈಲ್ ಸಿನಿಮಾ ಮಾಡಿ, ಸಿನಿ ಪ್ರೇಕ್ಷಕರನ್ನು ಹೆಚ್ಚು ರಂಜಿಸಿ ಇನ್ನೊಂದು ಕಡೆ ನಿಧಿಮಾ ನೆನಪಲ್ಲಿಯೇ ಕಣ್ಣೀರು ಹಾಕಿಸಿದ್ದ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಲವ್ ಮಾಕ್‌ಟೇಲ್ 2 ಮಾಡಿ ಗೆದ್ದಿದೆ ಎನ್ನಬಹುದು. ಹೌದು ನಾಯಕ ನಟ ಕೃಷ್ಣ ಅವರ ಮತ್ತೊಂದು ದೀರ್ಘಾವಧಿಯ ಚಿತ್ರ ಲೋಕಲ್ ಟ್ರೈನ್ ಈಗ ಎಲ್ಲಾ ಸಿದ್ಧತೆ ಮಾಡಿಕೊಂಡು ಅಂತಿಮವಾಗಿ ತೆರೆಗೆ ಬರಲು ಸಜ್ಜಾಗಿದೆಯಂತೆ. ಸಿನಿಮಾ ಇದೆ ಏಪ್ರಿಲ್ ಒಂದಕ್ಕೆ ಬರುತ್ತಿದ್ದು, ಅಭಿಮಾನಿಗಳು ಇಟ್ಟ ಆ ನಿರೀಕ್ಷೆಯನ್ನು ನಿಜ ಮಾಡಲು ಎಂಟ್ರಿ ಕೊಡುತ್ತಿದೆ.
ಲೋಕಲ್ ಟ್ರೈನ್ ಸಿನಿಮಾವನ್ನ ಎಸ್ ಹೆಚ್ ವಾಲ್ಕೆ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮೀನಾಕ್ಷಿ ದೀಕ್ಷಿತ್, ಎಸ್ಟರ್ ನೊರೊನ್ಹಾ ಮತ್ತು ಸಾಧು ಕೋಕಿಲಾ ಕೂಡ ನಟಿಸಿರುವ ಆಕ್ಷನ್ ಹಾಗೂ ಸಕತ್ ರೋಮ್ಯಾಂಟಿಕ್ ಚಿತ್ರ ಲೋಕಲ್ ಟ್ರೈನ್ ಏಪ್ರಿಲ್ 1 ರಂದು ಬರುತ್ತಿದೆ. ಹೌದು ನಿರ್ದೇಶಕ ರುದ್ರಮಣಿ ನಿರ್ದೇಶನದಲ್ಲಿ ಈ ಲೋಕಲ್ ಟ್ರೈನ್ ಸಿನಿಮಾ ಮೂಡಿ ಬರುತ್ತಿದ್ದು ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ರೈಲಿನಲ್ಲಿ ಪ್ರಯಾಣಿಸುವ ಜನರ ಸುತ್ತವೆ ಸುತ್ತುತ್ತದಂತೆ ಈ ಲೋಕಲ್ ಟ್ರೈನ್ ಸಿನಿಮಾ ಕಥೆ. ಹೌದು ಸುಬ್ರಾಯ ವಾಲ್ಕೆ ಅವರ ಬೆಂಬಲದೊಂದಿಗೆ, ಲೋಕಲ್ ಟ್ರೈನ್‌ನಲ್ಲಿ ಭಜರಂಗಿ ಲೋಕಿ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ..
ಅರ್ಜುನ್ ಜನ್ಯ ಸಂಗೀತವಿದ್ದು, ಲೋಕಲ್ ಟ್ರೈನ್ ಚಿತ್ರಕ್ಕೆ ರಮೇಶ್ ಬಾಬು ಅವರು ಛಾಯಾಗ್ರಹಣ ನೀಡಿದ್ದಾರೆ. ಲವ್ ಮಾಕ್ಟೈಲ್ 2 ರ ನಂತರ, ನಟ ಡಾರ್ಲಿಂಗ್ ಕೃಷ್ಣ ಅವರು ತಮ್ಮ ನಟನೆಯ ಕಾರ್ಯಯೋಜನೆಯ ಮೇಲೆ ಹೆಚ್ಚು ಸಕಾರಾತ್ಮಕವಾಗಿ ಕೇಂದ್ರೀಕರಿಸುತ್ತಿದ್ದಾರೆ. ಹೌದು ಹೆಚ್ಚು ಸಿನಿಮಾಗಳಲ್ಲಿ ಬಿಜಿ ಇರುವ ನಟ ಡಾರ್ಲಿಂಗ್ ಕೃಷ್ಣ ಅವರ ಕೈಯ್ಯಲ್ಲಿ ಇದೀಗ ಸಾಕಷ್ಟು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಲಕ್ಕಿ ಮ್ಯಾನ್ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಕೃಷ್ಣ ಅವರು, ಶುಗರ್ ಫ್ಯಾಕ್ಟರಿ, ದಿಲ್ ಪಸಂದ್, ಲವ್ ಮಿ ಆರ್ ಹೇಟ್ ಮಿ, ಹಾಗೆ ಮತ್ತೊಂದು ಪ್ರೇಮ್ ಕಹಾನಿ ಲವ್ ಬರ್ಡ್ಸ್ ಸಿನಿಮಾ ನಿರ್ಮಾಣದ ವಿವಿಧ ಹಂತಗಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ಎಲ್ಲರೂ ತಪ್ಪದೆ ಏಪ್ರಿಲ್ ಒಂದಕ್ಕೆ ಲೋಕಲ್ ಟ್ರೈನ್ ಸಿನಿಮಾವನ್ನು ಥಿಯೇಟರ್ ನಲ್ಲೇ ವೀಕ್ಷಿಸಿ ಪ್ರೋತ್ಸಾಹ ನೀಡಿ ಧನ್ಯವಾದ..
Comments
Post a Comment